ಶ್ರೀ ಸಿ. ಪಿ. ಬೆಳ್ಳಿಯಪ್ಪನವರ ಪೂರ್ಣ ಹೆಸರು ಚೆಪುಡಿರ ಪೂಣಚ್ಚ ಬೆಳ್ಳಿಯಪ್ಪ. ಇವರ ತಂದೆ ಕೊಡಗಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ. ಎಂ. ಪೂಣಚ್ಚನವರು. ಮೂಲತ: ಕೆಮಿಕಲ್ ಇಂಜಿನಿಯರ್ ಆದ ಇವರು, ಕೆಲಕಾಲ ಅಮೇರಿಕಾದಲ್ಲಿ ನೆಲೆಸಿ, ೧೯೯೦ ರಿಂದ ಈಚೆಗೆ ಕೊಡಗಿನಲ್ಲಿ ನೆಲೆಸಿದ್ದಾರೆ. ಕೊಡಗಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶುರುವಾಗುವಲ್ಲಿ ಇವರ ಪಾತ್ರ ಮಹತ್ವದ್ದು. ಇವರು ಪ್ರಸ್ತುತ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಗೌರವ ಅಧ್ಯಕ್ಷರು . ಕೊಡಗಿನ ಬಗ್ಗೆ ಅಪಾರ ಪ್ರೀತಿ ಉಳ್ಳ ಇವರು, ಕೊಡಗಿನ ಬಗ್ಗೆ ಮೂರು ಇಂಗ್ಲೀಷ್ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ನಿಯಮಿತವಾಗಿ ಪತ್ರಿಕೆಗಳಿಗೆ ಕೂಡ ಲೇಖನಗಳನ್ನು ಬರೆಯುತ್ತಾರೆ. == ಕೃತಿಗಳು == ' === ಅನುವಾದಿತ ಕೃತಿ === ವಿಕ್ಟೋರಿಯಾ ಗೌರಮ್ಮ - ಕನ್ನಡಕ್ಕೆ ಅನುವಾದಗೊಂಡ ಕೃತಿ == ಉಲ್ಲೇಖ == == ಬಾಹ್ಯ ಸಂಪರ್ಕಗಳು == ಸಿ. ಪಿ. ಬೆಳ್ಳಿಯಪ್ಪನವರ ಪುಸ್ತಕಗಳ ವಿವರ ರೂಪ ಪಬ್ಲಿಷರ್ಸ್ ಅವರ ಅಂತರಜಾಲ ಪುಟದಲ್ಲಿ ಶ್ರೀ ಸಿ. ಪಿ. ಬೆಳ್ಳಿಯಪ್ಪನವರ ವಿವರ ಚುಕ್ಕುಬುಕ್ಕು ಕನ್ನಡ ಅಂತರಜಾಲ ಪುಟದಲ್ಲಿ ಶ್ರೀ ಸಿ. ಪಿ. ಬೆಳ್ಳಿಯಪ್ಪನವರ ವಿವರ